Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕನ್ನಡ ಚಿತ್ರರಂಗದ ಕನ್ನಡದ ಕುಳ್ಳ ಇನ್ನಿಲ್ಲ
Posted date: 16 Tue, Apr 2024 06:42:26 PM
ಕನ್ನಡ ಚಿತ್ರರಂಗದಲ್ಲಿ ಕುಳ್ಳ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ನಟ, ನಿರ್ದೇಶಕ ನಿರ್ಮಾಪಕ ದ್ವಾರಕೀಶ್ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ., ಅವರಿಗೆ 82 ವರ್ಷ  ವಯಸ್ಸಾಗಿತ್ತು.

ಬಂಗಲೆ ಶಾಮರಾವ್ ದ್ವಾರಕಾನಾಥ್ ಮೂಲ ಹೆಸರು ಹೊಂದಿದ್ದ ದ್ವಾರಕೀಶ್ ಬೆಂಗಳೂರಿನ ನಿವಾಸಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಐವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

1942  ಆಗಸ್ಟ್ 19 ರಂದು ಬಂಗಲೆ ಶಾಮ ರಾವ್ ಮತ್ತು ಜಯಮ್ಮ ದಂಪತಿಗೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನ್ಮತಾಳಿದ್ದ ದ್ವಾರಕೇಶ್ ಬೆಳೆದದ್ದು ಮೈಸೂರಿನ ಇಟ್ಟಿಗೆಗೂಡಿನಲ್ಲಿ  ಬದುಕು ಕಟ್ಟಿಕೊಂಡಿದ್ದು ಕನ್ನಡ ಚಿತ್ರರಂಗದಲ್ಲಿ. ಅವರ ನಡೆದು ಬಂದ ಹಾದಿ ಬಲು ರೋಚಕ

ದ್ವಾರಕೇಶ್ ತಮ್ಮ ನಿರ್ಮಾಣ ಸಂಸ್ಥೆ ಪ್ರಾರಂಭಿ 1969 ರಲ್ಲಿ "ದ್ವಾರಕೇಶ್ ಚಿತ್ರ". ಅವರ ಮೊದಲ ನಿರ್ಮಾಣ "ಮೇಯರ್ ಮುತ್ತಣ್ಣ" ಕನ್ನಡ ಚಿತ್ರ ನಿರ್ಮಾಣ ಮಾಡಿದ್ದರು.ಈ ಚಿತ್ರದಲ್ಲಿ ರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದರು ಅದಾದ ನಂತರ ಆಪ್ತಮಿತ್ರ ತನಕ ಅನೇಕ ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು

ಚಿತ್ರರಂಗದಲ್ಲಿ ಗೆಲುವಿನಷ್ಠೇ ಸೋಲು ಕಂಡಿದ್ದ ಅವರು ಕಡೆ ಕಡೆಗೆ ನಿರ್ಮಾಣದಲ್ಲಿ ಸೋತು ಹೋಗಿದ್ದರು ಅಂತಹ ಸಮಯದಲ್ಲಿ ಅವರನ್ನು ಕೈಹಿಡಿದಿದ್ದು ಆಪ್ತಮಿತ್ರ ಚಿತ್ರ. ಅದು ತಮ್ಮ ಸ್ನೇಹಿತ ಡಾ, ವಿಷ್ಣುವರ್ಧನ್ ಅವರು ನಟಿಸಿದ್ದ ಚಿತ್ರ ಕೈಹಿಡಿದಿತ್ತು

ತಮ್ಮ ಬ್ಯಾನರ್ ಅಡಿಯಲ್ಲಿ 47 ಚಲನಚಿತ್ರಗಳನ್ನು ನಿರ್ಮಿಸಿದರು. ಅವರು 1974-1986ರ ಅವಧಿಯಲ್ಲಿ ಕನ್ನಡದ ಸೂಪರ್ಸ್ಟಾರ್ ವಿಷ್ಣುವರ್ಧನ್ ಅವರೊಂದಿಗೆ ಒಂದು ಡಜನ್ ಚಲನಚಿತ್ರಗಳನ್ನು ಮಾಡಿ ಯಶಸ್ಸು ಕಂಡಿದ್ದರು 2004 ರಲ್ಲಿ ಆಪ್ತ ಮಿತ್ರ ಬರುವ ತನಕ ಅನೇಕ ಯಶಸ್ವಿ ಚಿತ್ರ ನೀಡಿದ್ದರು

ಪ್ರಾಥಮಿಕ ಶಿಕ್ಷಣವನ್ನು ಶಾರದ ವಿಲಾಸ ಮತ್ತು ಬನುಮಯ್ಯ ಅವರ ಶಾಲೆಯಲ್ಲಿ ಪಡೆದರು ಮತ್ತು ಅವರು ಸಿಪಿಸಿ ಪಾಲಿಟೆಕ್ನಿಕ್‍ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾದೊಂದಿಗೆ ಉತ್ತೀರ್ಣರಾಗಿದ್ದರು ದ್ವಾರಕೀಶ್ ಮತ್ತು ಅವರ ಸಹೋದರ "ಭಾರತ್ ಆಟೋ ಸ್ಪೇರ್ಸ್" ಎಂಬ ಆಟೋಮೋಟಿವ್ ಬಿಡಿಭಾಗಗಳ ವ್ಯಾಪಾರ ಪ್ರಾರಂಭಿಸಿದ್ದರ

ತಮ್ಮ ತಾಯಿಯ ಚಿಕ್ಕಪ್ಪ, ಖ್ಯಾತ ಸಿನಿಮಾ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರನ್ನು ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವಂತೆ ಕೇಳುತ್ತಿದ್ದರು. 1963ರಲ್ಲಿ ವ್ಯಾಪಾರವನ್ನು ತೊರೆದು ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕನ್ನಡ ಚಿತ್ರರಂಗದ ಕನ್ನಡದ ಕುಳ್ಳ ಇನ್ನಿಲ್ಲ - Chitratara.com
Copyright 2009 chitratara.com Reproduction is forbidden unless authorized. All rights reserved.